ಕಾರವಾರದ ಕಡಲ ತಡಿಯಲ್ಲಿ “ಭಾರತ ಭಾಗ್ಯ ವಿಧಾತ “

35ಅಲ್ಲಿ ಅಲೆಗಳ ಲಾಸ್ಯವಿತ್ತು, ಹಾಲಿನಂತೆ ಚೆಲ್ಲಿದ ಬೆಳದಿಂಗಳಿತ್ತು .ಬೀಸುವ ತಂಗಾಳಿಯಿತ್ತು . ಅದು ಕವಿವರ್ಯ ರವೀಂದ್ರನಾಥ ಠಾಗೋರ್ ಅವರು ಮೆಚ್ಚಿದ ಕಾರವಾರದ ಕಡಲ ತೀರ . ಇಂತಹ ಭವ್ಯ ಹಿನ್ನೆಲೆಯ ಪ್ರಕೃತಿ ತಾಣವನ್ನು ಬೆನ್ನಿಗಿಟ್ಟುಕೊಂಡು ನಡೆದ ನಮ್ಮ ” ಭಾರತ ಭಾಗ್ಯ ವಿಧಾತ ” ಧ್ವನಿ ಬೆಳಕಿನ ಕಾರ್ಯಕ್ರಮ ಇಡೀ ಕಾರವಾರದ ಪ್ರೇಕ್ಷಕರ ಮನ ಗೆದ್ದಿದೆ .

 

29ಕಾರ್ಯಕ್ರಮದ ಉದ್ಘಾಟನೆ ಮಾಡಿ ತೆರಳುತ್ತೇನೆ ಎಂದು ಬಂದ  ಜಿಲ್ಲಾಧಿಕಾರಿ ನಕುಲ್ ಅವರು ಕಾರ್ಯಕ್ರಮ ಮುಗಿಯುವವರೆಗೆ ಮೂಕ ವಿಸ್ಮಿತರಾಗಿ ಕುಳಿತಿದ್ದರು. ಕಾರ್ಯಕ್ರಮಕ್ಕೆ ಒಬ್ಬರೇ ಆಗಮಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ತಮ್ಮ ಕುಟುಂಬವನ್ನು ಕರೆಸಿ ಕೊಂಡು ಕಾರ್ಯಕ್ರಮ ವೀಕ್ಷಿಸಿದರು.ಕಾರವಾರದ ಕರಾವಳಿ ಜನರು ತಮ್ಮ ಸಹಜ ಬಿಗುಮಾನಕ್ಕೆ ವಿರಾಮ ನೀಡಿ ಚಪ್ಪಾಳೆ ತಟ್ಟಿ , ಕೇಕೆ ಹಾಕಿ ತಮ್ಮ ಉತ್ಸಾಹ ಹೊರ ಚೆಲ್ಲಿದರು.

 

bbv21ನೂರು ಪುಸ್ತಕ ಓದಿದರೂ ಪಡೆಯಲಾಗದ ಅಂಬೇಡ್ಕರ್ ಅನುಭವವನ್ನು  ಈ  ‘ ಭಾರತ ಭಾಗ್ಯ ವಿಧಾತ ‘ ಧ್ವನಿ ಬೆಳಕು ಕಾರ್ಯಕ್ರಮ ನೀಡಿತು ಎಂದು ಕಾರ್ಯಕ್ರಮ ನೋಡಿದವರೆಲ್ಲಾ ಒಕ್ಕೊರಲಿನಿಂದ ಹೇಳಿದರು.

 

ಇಂತಹ ಅಪರೂಪದ ಅದ್ಬುತ ಕಾರ್ಯಕ್ರಮದ ಪರಿಕಲ್ಪನೆ ಮಾಡಿ ನಾಡಿನ ಜನತೆಗೆ ಉಣಬಡಿಸಿದ ವಾರ್ತಾ ಇಲಾಖೆಯ ಬಗ್ಗೆ ಪ್ರಶಂಸೆಯ ಸುರಿಮಳೆಗರೆದರು.

 

1-34

 

 

ಈ ಯಶಸ್ಸಿನಲ್ಲಿ ಭಾಗಿಯಾದ ಧ್ವನಿ ಬೆಳಕು ಕಾರ್ಯಕ್ರಮ ರೂಪಿಸಿದ ಪರಿಕಲ್ಪನೆಯ ಕರ್ತೃ , ನಿರ್ದೇಶಕರು , ಸಂಗೀತ ಮತ್ತು ನೃತ್ಯ ಸಂಯೋಜಕರು , ರಂಗ ವಿನ್ಯಾಸಕರು ,

ಧ್ವನಿ ಬೆಳಕು ತಜ್ಞರು, ಕಲಾವಿದರು, ರಂಗದ  ಹಿಂದಿನ ಕುಶಲ ಕರ್ಮಿಗಳು ಎಲ್ಲರೂ  ಪ್ರಶಂಸೆಗೆ ಪಾತ್ರರಾದರು.

n-r-vishukumar
ಎನ್ ಆರ್ ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s