ಜೋಗ ಸಿರಿ ಜಿಲ್ಲೆ ಶಿವಮೊಗ್ಗದಲ್ಲಿ ಪ್ರದರ್ಶನಗೊಂಡ ‘ಭಾರತ ಭಾಗ್ಯ ವಿಧಾತ’ ಉದ್ಘಾಟನೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪ್ರೇಕ್ಷಕರ ಕಾತರತೆಯಿಂದ ಕಾದಿದ್ದ ‘ಭಾರತ ಭಾಗ್ಯ ವಿಧಾತ’ ಶುರುವಾಯ್ತು. ಇಡೀ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ. ವೇದಿಕೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಸಂಗೀತದ ಅಲೆಗಳೇಳುತ್ತಿದ್ದರೆ, ಪ್ರೇಕ್ಷಕರು ಮನದಲ್ಲಿ ಮತ್ತೆ ಮತ್ತೆ ತರಂಗಗಳು ಗುನುಗುತ್ತಿದ್ದವು. ‘ಭಾರತ ಭಾಗ್ಯ ವಿಧಾತ’ದ ಕಾರ್ಯಕ್ರಮದ ನಂತರ ಪ್ರೇಕ್ಷಕರು ನಿರ್ದೇಶಕ ಗಿರಿರಾಜ್ ಮತ್ತು ಕಲಾವಿದರ ಮನೋಜ್ಞ ಅಭಿನಯವನ್ನು ಎಲ್ಲರೂ ಕೊಂಡಾಡಿದರು.

Advertisements