ಬಯೋಸ್ಕೋಪ್ ಗೆ ಮರುಜೀವ ನೀಡಿದ ವಾರ್ತಾ ಇಲಾಖೆ

dipr-biascopeಸದಾ ಹೊಸತನಕ್ಕೆ ತುಡಿಯುವ ಇಲಾಖೆ . ತನ್ನ ಪ್ರಚಾರ ವಿಧಾನಗಳಲ್ಲಿ ಕಾರ್ಯಕ್ರಮಗಳಲ್ಲಿ ಸದಾ ನಾವಿನ್ಯತೆ , ಕುತೂಹಲ, ಆಕರ್ಷಣೆ ಇರಬೇಕೆಂದು ಬಯಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಹಳೆಯ ಪ್ರಚಾರ ಉಪಕರಣ ಬಯೋಸ್ಕೋಪಿಗೆ ಮರುಜೀವ ತುಂಬುವ ಕಾರ್ಯವನ್ನು ಇಲಾಖೆ ಕೈಗೆತ್ತಿ ಕೊಂಡಿದೆ.

ನಲವತ್ತು ವರ್ಷಗಳ ಹಿಂದೆ ಸಣ್ಣವರಿದ್ದಾಗ ಬಹಳಷ್ಟು ಮಂದಿ ಜಾತ್ರೆ, ಸಂತೆಗಳಲ್ಲಿ ಈ ಬಯೋಸ್ಕೋಪನ್ನು ನೋಡಿದ್ದಿರಬಹುದು. ಅವುಗಳ ಒಳಗೆ ಇಣುಕಿ ಅಂದಿನ ಸಿನಿಮಾ ತಾರೆಯರ , ತಾಜ್ ಮಹಲ್, ಕೆ ಆರ್ ಎಸ್ ಇತ್ಯಾದಿ ಪ್ರವಾಸಿ ತಾಣಗಳ ಚಿತ್ರಗಳನ್ನ ಕುತೂಹಲದಿಂದ ನೋಡಿರಬಹುದು. ಈಗ ವಾರ್ತಾ ಇಲಾಖೆ ಈ ಬಯೋಸ್ಕೋಪನ್ನು ಮತ್ತೆ ಮರು ಚಲಾವಣೆಗೆ ತಂದಿದೆ.

ಈ ಹಿಂದೆ ನೆಹರು 125 ನೇ ವರ್ಷಾಚರಣೆ , ದೇವರಾಜ ಅರಸು ಶತಮಾನೋತ್ಸವ ಸಂದರ್ಭದಲ್ಲಿ ಈ ಬಯೋಸ್ಕೋಪ್ ಮೂಲಕ ಅವರ ಜೀವನ ಚಿತ್ರಣವನ್ನು ಜನರಿಗೆ ನೀಡಲಾಗಿತ್ತು .ಇದೀಗ ವಾರ್ತಾ ಇಲಾಖೆ ಈ ಬಯೋಸ್ಕೋಪ್ ಮೂಲಕ ಸರ್ಕಾರದ ಜನಪ್ರಿಯ ಹಾಗೂ ಜನಪರ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದೆ . ನಮ್ಮ ಈ ಪ್ರಯತ್ನ ನಿಮಗೆ ಆಕರ್ಷಣೆ ಹುಟ್ಟಿಸಿದೆ ಎನ್ನುವ ವಿಶ್ವಾಸ ನಮ್ಮದು ಎನ್ನುತ್ತಾರೆ ವಾರ್ತಾ ಇಲಾಖೆ ನಿರ್ದೇಶಕರಾದ  ಎನ್ . ಆರ್ ವಿಶುಕುಮಾರ್ ಅವರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s