ಡಿಸಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶಗಳು

ಬೆಂಗಳೂರು ವಿಧಾನಸೌಧದ ಸಮ್ಮೆಳನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾದಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಆದೇಶಿಸಿದ ಮಾಹಿತಿಗಳು ಈ ಮುಂದಿನಂತೆ ಇವೆ.4
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಇತ್ತೀಚೆಗೆ ಕೈಗೊಳ್ಳುತ್ತಿರುವ ಹಲವಾರು ಪ್ರಯೋಗಗಳಿಂದ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ಹಾಗೂ ಅರ್ಹರಿಗೆ ಪಡಿತರ ಚೀಟಿ ನೀಡಲು ಪ್ರಥಮ ಆಧ್ಯತೆ ನೀಡಿ ಅನರ್ಹರ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆಧ್ಯತೆ ನೀಡುವಂತೆ ಸೂಚಿಸಲಾಯಿತು.
ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಬಳಸಿ ವೇಗವಾಗಿ, ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಂತೆ ನಿರ್ದೇಶನ ನೀಡಲಾಯಿತು.
ಬೆಳೆ ಹಾನಿ ಪರಿಹಾರ ಸಂಬಂಧ 2015-16ನೇ ಸಾಲಿನ ಮುಂಗಾರು ಮತ್ತು ಹಿಂಗಾರಿನಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ಇನ್‍ಪುಟ್ ಸಬ್ಸಿಡಿಯನ್ನು ಪೂರ್ಣವಾಗಿ ರೈತರಿಗೆ ವಿತರಿಸಿದ್ದು, 2016-17ನೇ ಸಾಲಿನ ಬೆಳೆ ಪರಿಹಾರಕ್ಕಾಗಿ ಘೋಷಣೆ ಮಾಡಿರುವ ಅನುದಾನವು ಈವರೆಗೆ ರಾಜ್ಯ ಸರ್ಕಾರಕ್ಕೆ ತಲುಪಿರುವುದಿಲ್ಲ. ಆದ್ದರಿಂದ ಎಲ್ಲಾ ಸಚಿವ ಸಂಪುಟ ಸಹದ್ಯೋಗಿಗಳು ಜನರಿಗೆ ಸರಿಯಾದ ಮಾಹಿತಿ ಒದಗಿಸಲು ಸೂಚಿಸಲಾಯಿತು.
ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಇಲಾಖೆಯ ವಸತಿ ನಿಲಯ, ವಸತಿ ಶಾಲೆ, ಸ್ಮಶಾನ, ರೈತ ಸಂಪರ್ಕ ಕೇಂದ್ರ, ಅಂಗನವಾಡಿ ಕೇಂದ್ರ ಇವುಗಳಿಗೆ ಅವಶ್ಯವಿರುವ ನಿವೇಶನವನ್ನು ಆಧ್ಯತೆ ಮೇರೆಗೆ ಸರ್ಕಾರಿ ಜಾಗಗಳಲ್ಲಿ ನೀಡುವಂತೆ, ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ನೀಡಲು ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರಿ ಜಮೀನುಗಳ ತಃಖ್ತೆಯನ್ನು ಸಿದ್ದಪಡಿಸಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಮಾಹಿತಿಗೆ ದೊರಕುವಂತೆ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರಿ ಭೂಮಿ ಒತ್ತುವರಿ ಪ್ರದೇಶಗಳನ್ನು, ಅದರಲ್ಲೂ ನಗರ ಪ್ರದೇಶಗಳ ಸಮೀಪದಲ್ಲಿ ಪತ್ತೆ ಹಚ್ಚಿ ಒತ್ತುವರಿ ತೆರವುಗೊಳಿಸಲು ಮತ್ತು ಆ ರೀತಿ ವಶಪಡಿಸಿಕೊಂಡ ಜಮೀನನ್ನು ಸರ್ಕಾರಿ ಉದ್ದೇಶಗಳಿಗೆ ಹಂಚಿಕೆ ಮಾಡುವಂತೆ ಸೂಚಿಸಲಾಯಿತು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ಕೈಗೊಳ್ಳುವಂತೆ ಹಾಗೂ ಜನ ಸಾಮಾನ್ಯರ ಪ್ರತಿಕ್ರಿಯೆ ಪಡೆದು ಸರ್ಕಾರಿ ಸೇವೆ ಉತ್ತಮ ಪಡಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಈಗಾಗಲೇ ಆಯವ್ಯಯ ಭಾಷಣದಲ್ಲಿ ಸಮಾಜದ ವಿಶೇಷ ವರ್ಗದ ಜನರಿಗೆ (ಹೆಚ್‍ಐವಿ ಪೀಡಿತ, ದೇವದಾಸಿ, ಕುಷ್ಠ ರೋಗಪೀಡಿತ, ವಿಧವೆ ಇತ್ಯಾದಿ) ಡಿ.ದೇವರಾಜ ಅರಸು ವಸತಿ ಯೋಜನೆ ರೂಪಿಸಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಿಸಿಕೊಡಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವು 100 ದಿನಗಳ ಮಿತಿಯನ್ನು 150 ದಿನಗಳಿಗೆ ಹೆಚ್ಚಿಸಿದ್ದು, ರಾಜ್ಯ ಸರ್ಕಾರದ ಗುರಿಯನ್ನು 10 ಕೋಟಿ ಮಾನವ ದಿನಗಳ ಸೃಜನೆಗೆ ಹೆಚ್ಚಿಸಿರುತ್ತದೆ. ಈ ಯೋಜನೆಯಡಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು ಉತ್ತಮ ಪ್ರಗತಿ ಸಾಧಿಸಿದ್ದು, ಪರಿಷ್ಕøತ ಗುರಿಯನ್ನು ತಲುಪಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಮೇವು ಲಭ್ಯತೆ ಮತ್ತು ಅವಶ್ಯಕತೆ ಬಗ್ಗೆ ನಿಖರವಾದ ಅಂದಾಜು ಪಟ್ಟಿ ಸಿದ್ದಪಡಿಸಿ ಮೇವಿನ ಕೊರತೆ ಆಗದಂತೆ ಜೂನ್-2017ರವರೆಗೆ ಕ್ರಿಯಾ ಯೋಜನೆ ರೂಪಿಸಲು ಮತ್ತು ಅಂತರ್ ರಾಜ್ಯ ಮೇವು ಸಾಗಾಣಿಕೆ ನಿಯಂತ್ರಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಎಲ್ಲರಿಗೂ ಕುಡಿಯುವ ನೀರು ಒದಗಿಸಲು ಅವಶ್ಯವಿರುವ ಕಡೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ನೀರು ಲಭ್ಯತೆ ಮತ್ತು ಜನ ಸಂಖ್ಯೆಗೆ ಅನುಗುಣವಾಗಿ ದರ ನಿಗಧಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
01.04.2017ರಿಂದ ಎಲ್ಲಾ ಪಿಂಚಣಿದಾರರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪಿಂಚಣಿದಾರರ ಆಧಾರ್ ಸಂಖ್ಯೆ ಮತ್ತು ಉಳಿತಾಯ ಖಾತೆ ವಿವರಗಳನ್ನು ಸಂಗ್ರಹಿಸಿ ಇಂಧೀಕರಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ವಸತಿ ಇಲಾಖೆಯ ವಿವಿಧ ಯೋಜನೆಗಳಿಗೆ ಖಾಸಗಿ ಜಮೀನು ಖರೀದಿಸಲು ಮಾರುಕಟ್ಟೆ ದರದ ಮೂರು ಪಟ್ಟಿನವರೆಗೆ ದರ ನಿಗಧಿಪಡಿಸಲು ಸೂಕ್ತ ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು.
ಮೋಜಣಿ ಅರ್ಜಿ ವಿಲೇವಾರಿ ಸಂಬಂಧ ಪ್ರತಿ ತಿಂಗಳು ಸ್ವೀಕೃತವಾಗುವ ಅರ್ಜಿಗಳ ಶೇ.150ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಮತ್ತು ಪ್ರತಿ ಮೋಜಣಿದಾರರಿಗೆ ಪ್ರತಿ ತಿಂಗಳು 30 ದಾಖಲೆಗಳನ್ನು ವಿಲೇ ಮಾಡುವ ಗುರಿ ನಿಗಧಿಪಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಮೋಜಣಿದಾರರ ಕಾರ್ಯದಕ್ಷತೆಗೆ ಅನುಗುಣವಾಗಿ ಶ್ರೇಣಿ ನೀಡುವ ಮತ್ತು ಸೂಕ್ತ ಪ್ರೋತ್ಸಾಹ ನೀಡಲು ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ.
ಮೋಜಣಿದಾರರ ಕೊರತೆ ನೀಗಿಸಲು ಅವಶ್ಯವಿದ್ದಲ್ಲಿ ನಿವೃತ್ತ ಮೋಜಣಿದಾರರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಯಿತು.
ರೈತ ಸಂಪರ್ಕ ಕೇಂದ್ರಗಳಿಗೆ ಅವಶ್ಯವಿರುವ ನಿವೇಶನಗಳನ್ನು ಸಾಧ್ಯವಾದಷ್ಟು ಕಂದಾಯ ಕಛೇರಿ ಸಮೀಪದಲ್ಲಿಯೇ ಒದಗಿಸುವಂತೆ ಸೂಚಿಸಲಾಯಿತು.
ರಾಜ್ಯ ಸರ್ಕಾರವು ರೈತರಿಗೆ ಇನ್‍ಪುಟ್ ಸಬ್ಸಿಡಿಯ ನೇರ ಹಣ ವರ್ಗಾವಣೆಗಾಗಿ ರೂಪಿಸಿರುವ “ಪರಿಹಾರ” ತಂತ್ರಾಂಶದಲ್ಲಿ ರೈತರ ಬ್ಯಾಂಕ್ ಖಾತೆ ದಾಖಲೆಗಳನ್ನು ದಿನಾಂಕ: 10.02.2017ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಮುಂಗಾರು ವಿಮಾ ಪರಿಹಾರದ ಬಗ್ಗೆ ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಶಾಖೆಗಳಲ್ಲಿ ರೈತರ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲನೆ ಕಾರ್ಯವನ್ನು ದಿನಾಂಕ: 05.02.2017ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಟಾಸ್ಕ್ ಫೋರ್ಸ್ ಅನುದಾನದಲ್ಲಿ ಕರಾವಳಿ ಭಾಗದಲ್ಲಿ ತೆರೆದ ಬಾವಿಗಳನ್ನು ಸಹ ಕೈಗೆತ್ತಿಕೊಳ್ಳಬಹುದಾಗಿ ಸ್ಪಷ್ಟೀಕರಣ ನೀಡಲಾಯಿತು.
ಕೃಷ್ಣ ಭಾಗ್ಯ ಜಲ ನಿಗಮದಿಂದ 106 ಪುನರ್ ವಸತಿ ಕೇಂದ್ರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಸಮನ್ವಯದಿಂದ ಪೂರ್ಣಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆಗಳಿಗೆ ಸೂಚಿಸಲಾಯಿತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿರುವುದನ್ನು ಅವಶ್ಯಕತೆಗೆ ಅನುಗುಣವಾಗಿ ಕೊಳಚೆ ನಿರ್ಮೂಲನ ಮಂಡಳಿಗೆ ಹಸ್ತಾಂತರಿಸಿ ಬಡವರಿಗೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಯಿತು.
ಫಲಾನುಭವಿಗಳ ಆಯ್ಕೆಗೆ ನಿಗಧಿಪಡಿಸಿದ್ದ ಅಂತಿಮ ದಿನಾಂಕ: 31.01.2017ಅನ್ನು ಒಂದು ವಾರಗಳ ಕಾಲ ವಿಸ್ತರಿಸಿದ್ದು, ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಿ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವಂತೆ ಸೂಚಿಸಲಾಯಿತು.
ಜಿಲ್ಲೆಗಳಲ್ಲಿ ಲಭ್ಯವಿರುವ ಖಾಸಗಿ ಜಮೀನುಗಳನ್ನು ಖರೀದಿಸಿ ನಿವೇಶನ ಅಭಿವೃದ್ಧಿ ಪಡಿಸಲು ಜಾಗೃತ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದೆಂದು ಸೂಚನೆ ನೀಡಲಾಯಿತು.
ನಗರ ಪ್ರದೇಶಗಳಲ್ಲಿ ಅವಶ್ಯ ಜಾಗ ಲಭ್ಯವಿಲ್ಲದಿದ್ದಲ್ಲಿ ಸ್ಥಳೀಯ ಸಂಸ್ಥೆ ಸಹಭಾಗಿತ್ವದಲ್ಲಿ ಗುಂಪು ಮನೆ ನಿರ್ಮಾಣ ಯೋಜನೆ ರೂಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಅದೇ ರೀತಿ ನಗರ ಪ್ರದೇಶಗಳಲ್ಲಿ ಜಿ+3 ವಸತಿ ನಿರ್ಮಾಣ ಯೋಜನೆಗೆ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೂಡೀಕರಣಕ್ಕೆ ಕ್ರಮ ವಹಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಲಾಯಿತು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರೂ.5 ಲಕ್ಷ ಪರಿಹಾರ ಸೇರಿದಂತೆ ಸರ್ಕಾರ ಘೋಷಿಸಿರುವ ಇತರೆ ಸೌಲಭ್ಯಗಳಾದ ಪಿಂಚಣಿ, ಆರೋಗ್ಯ ಸೇವೆ, ಶಿಕ್ಷಣ, ಇತ್ಯಾದಿಗಳು ಸಕಾಲದಲ್ಲಿ ಒದಗಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ತೊಗರಿ ಬೇಳೆ ಖರೀದಿ ಕೇಂದ್ರಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸೂಕ್ತ ವರದಿಗಳನ್ನು ಪರಿಹಾರ ಕ್ರಮದೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ಹೋಬಳಿಗೊಂದು ವಸತಿ ಶಾಲೆ ಇರುವಂತೆ ಕ್ರಮ ವಹಿಸಲು ಸೂಚಿಸಲಾಯಿತು. ಅವಶ್ಯವಿದ್ದಲ್ಲಿ ಹೊಸದಾಗಿ ವಸತಿ ಶಾಲೆ ತೆರೆಯಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಯಿತು.
ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ ಹೋಬಳಿಗಳಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗೆ ನಿವೇಶನ ಒದಗಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಜಿಲ್ಲಾ ಮಟ್ಟದ ಜಾಗೃತಿ ಸಭೆಯನ್ನು ಕಡ್ಡಾಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವಂತೆ ಮತ್ತು ದೌರ್ಜನ್ಯಕ್ಕೆ ಒಳಗಾದ ದಳಿತ ಕುಟುಂಬಗಳಿಗೆ ಸಿಗಬೇಕಾದ ಪರಿಹಾರ, ಜಮೀನು, ನೌಕರಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
ಸಚಿವ ಸಂಪುಟ ತೀರ್ಮಾನದ ನಂತರ ಹೊರಡಿಸಲಾಗುವ ಸುತ್ತೋಲೆಗಳ ರೀತ್ಯಾ ಅರಣ್ಯ ಹಕ್ಕು ಕಾಯ್ದೆಯಡಿ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳನ್ನು ಹೊಣೆಯಾಗಿಸಲಾಗುವುದು.
ಸ್ಮಶಾನ ಅಭಿವೃದ್ಧಿ ಹಾಗೂ ಮುಜರಾಯಿ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣವಾಗಿ ಬಳಸುವಂತೆ ಮತ್ತು ಜಿಲ್ಲೆಯಲ್ಲಿ ನಡೆಯುವ ಪ್ರಗತಿ ಪರಿಶೀಲನ ಸಭೆಯಲ್ಲಿ ಕಡ್ಡಯವಾಗಿ ಪರಿಶೀಲನೆಗೊಳಪಡಿಸಿ, ಬಳಕೆ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವಂತೆ ಸೂಚಿಸಲಾಯಿತು.
ಗಂಗಾ ಕಲ್ಯಾಣ ಯೋಜನೆಯಡಿ 2015-16ನೇ ಸಾಲಿನವರೆಗಿನ ಬಾಕಿ ಸುಮಾರು 22792 ಕೊಳವೆ ಬಾವಿಗಳನ್ನು ಮಾರ್ಚ್-2017ರೊಳಗೆ ಪೂರ್ಣಗೊಳಿಸುವಂತೆ ಮತ್ತು 2012-13 ಮತ್ತು 2013-14ರವರೆಗಿನ ವಿದ್ಯುದ್ದೀಕರಣಕ್ಕಾಗಿ ಬಾಕಿ ಇರುವ ಸುಮಾರು 8000 ಪ್ರಕರಣಗಳನ್ನು ಮಾರ್ಚ್-2017ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಅದೇ ರೀತಿ 2017-18ನೇ ಸಾಲಿನಲ್ಲಿ 30,000 ಕೊಳವೆ ಬಾವಿಗಳಿಗೆ ವಿದ್ಯದ್ದೀಕರಣ ಮಾಡಲು ಇಂಧನ ಇಲಾಖೆಗೆ ಸೂಚನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ದಾಖಲೆಗಳನ್ನು ಸಲ್ಲಿಸಿದ 358 ಪ್ರಕರಣದಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ತಿಳುವಳಿಕೆ ಪತ್ರ ನೀಡಿ ಕೂಡಲೇ ಕಾಮಗಾರಿ ಪ್ರಾರಂಭಿಸಲು ಅಥವಾ ದಾಖಲೆ ಹಾಜರುಪಡಿಸಲು ವಿಫಲರಾಗುವ ಸಂಸ್ಥೆಯ ಅನುಮೋದನೆಯನ್ನು ರದ್ದುಪಡಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಪ್ರಗತಿಯಲ್ಲಿರುವ 959 ಕಾಮಗಾರಿಗಳ ಪೈಕಿ 300 ಕಾಮಗಾರಿಗಳನ್ನು ಮಾರ್ಚ್-2017ರೊಳಗೆ ಪೂರ್ಣಗೊಳಿಸುವಂತೆ ಹಾಗೂ ಅವಶ್ಯವಿರುವ ಕಡೆ ಸಂಸದರ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಸಿಎಸ್‍ಆರ್ ನಿಧಿಯನ್ನು ಹೊಂದಾಣಿಕೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸರ್ವೆ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕಂದಾಯ ಇಲಾಕೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚಿಸಲಾಯಿತು.
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗೆತ್ತಿಕೊಂಡಿರುವ 2013-14 ಮತ್ತು 2014-15ನೇ ಸಾಲಿನ ಎಲ್ಲಾ ಕಾಮಗಾರಿಗಳನ್ನು ಮಾರ್ಚ್-2017ರೊಳಗೆ ಪೂರ್ಣಗೊಳಿಸುವಂತೆ ಹಾಗೂ 2015-16ನೇ ಸಾಲಿನ ಕಾಮಗಾರಿಗಳನ್ನು ಮೇ-2017ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ದತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ನಿಗಾ ವಹಿಸಲು ಸಹ ಸೂಚಿಸಲಾಗಿದೆ.
ಶಿಕ್ಷಣ ಕಿರಣ ಯೋಜನೆಯಡಿ ಮಕ್ಕಳ ಹಾಗೂ ಪೋಷಕರ ಬಯೋಮೆಟ್ರಿಕ್ ದೃಢೀಕರಣ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಶಾಲಾ ಕಾಲೇಜುಗಳಿಗೆ ಕುಡಿಯುವ ನೀರು ಪೂರೈಸುವುದು ಸೇರಿದಂತೆ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯವನ್ನು ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ತಮ್ಮ ಅಧೀನ ಸ್ಥಳೀಯ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲು ಸೂಕ್ತ ಕಾರ್ಯವಿಧಾನ ಅಂತಿಮಗೊಳಿಸಲು ಸಂಬಂಧಪಟ್ಟ ಸಚಿವರುಗಳು ಸಭೆ ನಡೆಸುವಂತೆ ತೀರ್ಮಾನಿಸಲಾಯಿತು.
ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯ ಪುಸ್ತಕ ಮತ್ತು ಸೈಕಲ್‍ಗಳನ್ನು ಒದಗಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಯಿತು. ಈ ಸಂಬಂಧ ಮುಂಗಡವಾಗಿ ರೂ.150 ಕೋಟಿಗಳನ್ನು ಒದಗಿಸಲು ತೀರ್ಮಾನಿಸಲಾಯಿತು.
ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ ನಂತರವು ದಾಖಲಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಣ ಗುಣಮಟ್ಟ ಉತ್ತಮ ಪಡಿಸುವ ಅವಶ್ಯಕತೆಯನ್ನು ಮನಗೊಂಡು ಗಣಿತ, ವಿಜ್ಞಾನ, ಆಂಗ್ಲ ವಿಷಯಗಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಹೆಚ್ಚು ಒತ್ತು ನೀಡಲು ಮತ್ತು ಶಿಕ್ಷಕರಿಗೆ ಹೆಚ್ಚಿನ ತರಬೇತಿ ನೀಡಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯಕ್ಕಾಗಿ ಎಸ್‍ಸಿಪಿ/ಟಿಎಸ್‍ಪಿ, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಸೂಕ್ತ ಅವಕಾಶ ಕಲ್ಪಿಸಿ ಸಂಪನ್ಮೂಲ ಸದ್ಬಳಕೆ ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 5000 ಆಶಾ ಕಾರ್ಯಕರ್ತೆಯರ ನೇಮಕಾತಿ ಪೂರ್ಣಗೊಳಿಸುವಂತೆ ಹೆಚ್ಚು ಅಪಾಯಕಾರಿ ಗರ್ಭದಾರಣೆ ಪ್ರಕರಣಗಳ ಪಟ್ಟಿಯನುಸಾರ ಸದರಿ ಪ್ರಕರಣಗಳಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತಾಯಿ ಮರಣ ಪ್ರಮಾಣ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಕೆಳ ಹಂತದ ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
ಆಹಾರ ಭದ್ರತಾ ಕಾಯ್ದೆಯಡಿ ನೇಮಕಗೊಂಡಿರುವ ಆಹಾರ ಭದ್ರತ ಅಧಿಕಾರಿಗಳು ಗುಣ ಮಟ್ಟ ಕಾಯ್ದುಕೊಳ್ಳದ ಆಹಾರ ಪದಾರ್ಥ ಮಾರಾಟಗಾರರ ವಿರುದ್ಧ ಮತ್ತು ಕಣ್ಣಿಗೆ ಹಾನಿಯಾಗುವ ರೀತಿಯಲ್ಲಿ ವಿವಿಧ ಪೊಟ್ಟಣ/ಟ್ಯೂಬ್ ಮೂಲಕ ಮಾರಾಟವಾಗುವ ಸುಣ್ಣ ಮತ್ತು ನಿಷೇದಿಸಲ್ಪಟ್ಟ ಗುಟ್ಕ/ಪಾನ್ ಮಸಲಾ ಮಾರಾಟಗಾರರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಸೂಚಿಸಲಾಯಿತು.
ಗ್ಯಾಸ್ ಹೊಂದಿದವರಿಗೂ ಕೂಡ ಒಂದು ಲೀಟರ್ ಸೀಮೆ ಎಣ್ಣೆ ಕೊಡುವ ಯೋಜನೆ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಆಹಾರ ಇಲಾಖೆಗೆ ನಿರ್ದೇಶನ ನೀಡಲಾಯಿತು.
ಅಕ್ಕಿ ಬದಲಿಗೆ ಹಣ ನೀಡುವ ಯಾವುದೇ ಪ್ರಸ್ತಾಪ ಇರುವುದಿಲ್ಲ ಮತ್ತು ಈಗಿನ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ಸೂಚನೆ ನೀಡಲಾಯಿತು.
ಆಧಾರ್ ಲಿಂಕ್ ಆಗದೇ ಪಡಿತರ ಪಡೆಯಲು ಸಾಧ್ಯವಾಗದ ಸುಮಾರು 67 ಲಕ್ಷ ಪಡಿತರ ಸದಸ್ಯರಿಗೆ ಮುಂದಿನ 2 ತಿಂಗಳವರೆಗೆ ಪಡಿತರ ನೀಡಲು ತೀರ್ಮಾನಿಸಲಾಯಿತು. ಜೊತೆ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದರಿ ಪಡಿತರ ಸದಸ್ಯರ ಪರಿಶೀಲನೆ ಕಾರ್ಯ ಕೈಗೊಂಡು ಆಧಾರ್ ಲಿಂಕ್ ಮಾಡಿಸಿ, ಅರ್ಹರಿಗೆ ಪಡಿತರ ವಿತರಣೆ ಮುಂದುವರೆಸಲು ಹಾಗೂ ಅನರ್ಹರನ್ನು ಕೈಬಿಡಲು ಸೂಚಿಸಲಾಯಿತು. ಈ ಎಲ್ಲಾ ಪ್ರಕ್ರಿಯೆ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಡಾಂಬರೀಕರಣ ಕೆಲಸಗಳನ್ನು ಕಡ್ಡಾಯವಾಗಿ ಆಕ್ಟೋಬರ್‍ರಿಂದ ಮೇ ತಿಂಗಳವರೆಗೆ ಮಾತ್ರ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ತಿಳಿಸಲಾಯಿತು.
ನಗರೋತ್ಥಾನ ಹಂತ-4ರ ಪ್ರಸ್ತಾವನೆಯನ್ನು ಮುಂದಿನ ಆಯವ್ಯಯ ಸಮಯದಲ್ಲಿ ಮಂಡಿಸುವಂತೆ ಹಾಗೂ ಅನುದಾನ ಹಂಚಿಕೆಯಲ್ಲಿ ಹಾಗೂ ಅನುದಾನ ಹಂಚಿಕೆಯನ್ನು ಜನ ಸಂಖ್ಯೆಗೆ ಅನುಗುಣವಾಗಿ ಶಿಫಾರಸ್ಸು ಮಾಡಲು ಮತ್ತು Smಚಿಡಿಣ ಅiಣಥಿ ಯೋಜನೆ ಕೈಗೆತ್ತಿಕೊಂಡಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಯಿತು.
ಎಲ್ಲಾ ಜಿಲ್ಲಾಧಿಕಾರಿಗಳನ್ನು ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಪ್ರತಿ ತಿಂಗಳು ನಡೆಸುವಂತೆ ಮತ್ತು ವೈಫಲ್ಯ ತೋರಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಲಾಯಿತು.
ಈಗಾಗಲೇ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ಆರ್ಥಿಕ ವೆಚ್ಚದ ಮಿತಿಯನ್ನು ಹೆಚ್ಚಿಸಿರುವುದನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಸೂಚಿಸಲಾಯಿತು.
ವಸತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಗಳ ಸಮಸ್ಯೆಯನ್ನು ಬಗೆಹರಿಸಲು ಕಾನೂನು ಸಚಿವರು ಮತ್ತು ವಸತಿ ಸಚಿವರು ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s