ಜಿಲ್ಲೆಗೊಂದು ಗಾಂಧಿ ಭವನ ನಿರ್ಮಾಣ:ನಿರ್ದೇಶಕ ಎನ್ ಆರ್ ವಿಶುಕುಮಾರ್

dsc_4761ಪ್ರತಿ ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಗಾಂಧೀ ಭವನದ ನಿರ್ವಹಣೆ ಜವಾಬ್ದಾರಿಯನ್ನು ವಾರ್ತಾ ಇಲಾಖೆಗೆ ವಹಿಸಿದ್ದು, ಭವನವನ್ನು ಅರ್ಥಪೂರ್ಣವಾಗುವಂತೆ ನಿರ್ಮಿಸಲು ಸರ್ಕಾರವು ಯೋಜನೆ ರೂಪಿಸಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಹೇಳಿದರು.

5ಹುತಾತ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧೀ ಅಂಗಳದಲ್ಲಿರುವ ಗಾಂಧೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು ಇಲಾಖೆಯ ಗಾಂಧೀ ಅಂಗಳದ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಾಖೆ ವತಿಯಿಂದ ಗಾಂಧೀ ಅವರ ವಿಚಾರ, ತತ್ವ ಸಿದ್ದಾಂತಗಳ ಕುರಿತು ಕಿರುಪುಸ್ತಕಗಳನ್ನು ಪ್ರಕಟಿಸಿ ಉಚಿತವಾಗಿ ಲಕ್ಷಾಂತರ ಸಾರ್ವಜನಿಕರಿಗೆ ಹಂಚಲಾಗಿದೆ ಎಂದರು.

3ಅಹಿಂಸಾ ದಾರಿಯಲ್ಲಿಯೇ ಎಲ್ಲರೂ ನಡೆದಾಗ ಮಾತ್ರ ಗಾಂಧೀಜಿ ಅವರ ಆದರ್ಶ ಮತ್ತು ತತ್ವಗಳನ್ನು ಪಾಲಿಸಿದಂತಾಗುತ್ತದೆ ಎಂದು ಹಿರಿಯ ಪತ್ರಕರ್ತ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರು ಅಭಿಪ್ರಾಯಪಟ್ಟರು.
ಇಂದು ದೇಶ ಸೇವೆಗಾಗಿ ತ್ಯಾಗ ಬಲಿದಾನ ಮಾಡಿದ ವೀರಯೋಧ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸಲಾಗುತ್ತದೆ. ಆದರೆ ಅವರು ಅದಕ್ಕಾಗಿ ಪಟ್ಟ ಹಿಂಸೆ ನೋವುಗಳು ಎಷ್ಟೋ. ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ. ಅವರ ತ್ಯಾಗ ಬಲಿದಾನ ಪ್ರತಿಫಲವಾಗಿ ನಾವಿಂದು ಸುರಕ್ಷಿತವಾಗಿದ್ದೇವೆ ಎಂದು ಅವರು ತಿಳಿಸಿದರು.

4ಪತ್ರಕರ್ತರಾದ ಪದ್ಮರಾಜ್ ದಂಡಾವತಿ ಅವರು ಮಾತನಾಡಿ ಗಾಂಧೀಜಿ ಅವರ ಹತ್ಯೆಯಿಂದ ಮೌಲ್ಯಗಳ ಹತ್ಯೆ ಆಯಿತು. ಅವರಷ್ಟು ಸರಳ ಜೀವಿ ಮತ್ತೊಬ್ಬರು ನಮ್ಮ ದೇಶದಲ್ಲಿ ಹುಟ್ಟಿಲ್ಲ. ಹಿಂದೆ ಖಾದಿ ತೊಡುವುದು ಜೀವನವಾಗಿತ್ತು. ಆದರೆ ಇಂದು ಅದು ಪ್ಯಾಷನ್ ಆಗಿದೆ. ಹಳ್ಳಿಗಳಲ್ಲಿಯೇ ಎಲ್ಲರೂ ತಮ್ಮ ಜೀವನವನ್ನು ಕಂಡುಕೊಳ್ಳುತ್ತಿದ್ದರು. ಆದರೆ ಇಂದು ಹಳ್ಳಿ ಜನರು ನಗರದತ್ತ ಮುಖ ಮಾಡಿದ್ದಾರೆ ಎಂದರು.
ಆಧುನಿಕ ಜನರಲ್ಲಿ ಸಹನಶೀಲತೆ ಕಡಿಮೆಯಾಗುತ್ತಿದೆ. ಗಾಂಧೀಜಿ ಅವರ ವಿಚಾರಧಾರೆಗಳ ಕುರಿತು ಹಲವು ಪುಸ್ತಕಗಳು ಹಿಂದೆ ಪ್ರಕಟವಾಗುತ್ತಿತ್ತು. ಆದರೆ ಗಾಂಧೀ ಅವರ ವಿಚಾರ ಧಾರೆಗಳನ್ನು ಪ್ರಶ್ನೆ ಮಾಡುವ ಹರಿಲಾಲ್ ಅವರ ಪುಸ್ತಕಗಳನ್ನು ವೈಭವೀಕರಿಸಲಾಗುತ್ತಿದೆ ಇದರಿಂದ ಗಾಂಧಿ-ತತ್ವ ಸಿದ್ದಾಂತಗಳನ್ನು ವಿರೋಧಿಸುವವರು ಹೆಚ್ಚಾಗುತ್ತಿದ್ದಾರೆ ಎಂದು ವಿಷಾಧಿಸಿದರು.
dsc_4809ವಾರ್ತಾ ಬಳಗದಿಂದ ಭಜನೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಲಾಖೆಯ ಉಪ ನಿರ್ದೇಶಕರುಗಳಾದ ಹೆಚ್.ಬಿ. ದಿನೇಶ್, ಎ.ಆರ್. ಪ್ರಕಾಶ್, ಬಸವರಾಜ ಕಂಬಿ ಅವರೂ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ 2 ನಿಮಿಷ ಮೌನ ಆಚರಣೆ ಮಾಡುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s