ರಾಜ್ಯದ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಸಾಗುವ ಹೆಮ್ಮೆ

n-r-vishukumar
ಎನ್ ಆರ್ ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

 

ಪ್ರಿಯರೇ,
ನಮ್ಮ ಕರ್ನಾಟಕ ಹಲವು ವಿಷಯಗಳಲ್ಲಿ ಬಹಳ ಮುಂದು. ಇತ್ತೀಚಿಗೆ ನಮ್ಮ ಹೆಮ್ಮೆಯ ಬೆಂಗಳೂರು ಜಗತ್ತಿನಲ್ಲೇ ‘ಅತ್ಯಂತ ಚೈತನ್ಯಶೀಲ ‘ ನಗರ ಎನ್ನುವ ಮನ್ನಣೆ ಗಳಿಸಿದೆ. ಇದು ಸಾದಾರಣ ಸಂಗತಿಯಲ್ಲ. ಜಗದೇಕ ವೀರ ಎನ್ನುವಷ್ಟೇ ಹೆಮ್ಮೆಯ ವಿಷಯ .

5795ff25-daf6-4ee3-9630-a6d83eaa172a
ಆಯ್ಕೆಯೇ ಕಠಿಣ:
ಭಾರತ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಲು ಕಾರಣವಿದೆ .ಕಳೆದ ಎಂಟು ವರ್ಷಗಳಿಂದ ನಮ್ಮ ರಾಜ್ಯದ ಸ್ತಬ್ದ ಚಿತ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಗೌರವಕ್ಕೆ ಪಾತ್ರವಾಗಿದೆ. ಇದು ನಮ್ಮ ರಾಜ್ಯದ ಹೆಮ್ಮೆಯ ಸಾಧನೆ. ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಸಾಗಲು ಭಾರತದ ಎಲ್ಲಾ ರಾಜ್ಯಗಳ ನಡುವೆ ಸ್ಪರ್ದೆಯೇ ನಡೆಯುತ್ತದೆ. ಅಂತಿಮವಾಗಿ ಕೇವಲ ಹದಿಮೂರು ರಾಜ್ಯಗಳಿಗೆ ಮಾತ್ರ ರಾಜಪಥದ ಮೆರವಣಿಗೆಯಲ್ಲಿ ಸಾಗಲು ಅವಕಾಶ ಸಿಗುತ್ತದೆ. ಈ ಆಯ್ಕೆ ಪ್ರಕ್ರಿಯೆ ಕೂಡ ಕಠಿಣವಾಗಿರುತ್ತದೆ.
ಕೀ ಮಾದರಿ:

2ab8e0ea-b5d0-4f5f-8d47-100e82f43c5a
ಮೊದಲಿಗೆ ಆಯಾ ರಾಜ್ಯಗಳು ತಾವು ಪ್ರದರ್ಶನಗೊಳಿಸಲು ಬಯಸುವ ಮೂರ್ನಾಲ್ಕು ವಿಷಯಗಳನ್ನು ಚಿತ್ರ ವಿನ್ಯಾಸದೊಡನೆ ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು. ಈ ಸಮಿತಿ ಅದರಲ್ಲಿ ಒಂದೆರಡು ವಿಷಯಗಳನ್ನು ಆಯ್ಕೆ ಮಾಡಿ ಅದನ್ನು ಮತ್ತಷ್ಟು ಚೆಂದ ಮಾಡಿ ಪ್ರದರ್ಶಿಸುವಂತೆ ಹೇಳುತ್ತದೆ . ಇಲ್ಲಿ ಅಂತಿಮ ವಿಷಯ ಆಯ್ಕೆಯಾದ ನಂತರ ಅದರ ಮೂರು ಆಯಾಮದ ಕೀ ಮಾದರಿಯನ್ನು ಸಮಿತಿಯ ಮುಂದೆ ಪ್ರದರ್ಶಿಸ ಬೇಕು. ಇಲ್ಲಿ ಆಯ್ಕೆಯಾದ ನಂತರ ಸ್ತಬ್ದ ಚಿತ್ರ ಮಾದರಿಗೆ ಅನುಗುಣವಾದ ಒಂದು ನಿಮಿಷದ ಮೂರ್ನಾಲ್ಕು ಸಂಗೀತ ತುಣುಕುಗಳ ಜೊತೆ ಆಯ್ಕೆ ಸಮಿತಿಯ ಮುಂದೆ ತೋರಿಸಬೇಕು.
ಪರಿಶೀಲನೆ:

d6785e84-f3c4-42fe-9426-7e10751234a3
ಈ ಆಯ್ಕೆ ಸಮಿತಿಯಲ್ಲಿ ರಾಷ್ಟ್ರ ಖ್ಯಾತಿಯ ಕಲಾಕಾರರು, ವಿನ್ಯಾಸಗಾರರು , ಸಂಗೀತ ಪರಿಣಿತರು , ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ಇರುತ್ತಾರೆ . ಅವರೆಲ್ಲರೂ ಕಣ್ಣಲ್ಲಿ ಕಣ್ಣಿಟ್ಟು ನಮ್ಮ ಸ್ತಬ್ದ ಚಿತ್ರ ಮಾದರಿಯನ್ನು ಪ್ರತೀ ಹಂತದಲ್ಲಿ ಪರಿಶೀಲಿಸುತ್ತಾರೆ. ಅವರ ಮುಂದೆ ನಮ್ಮ ಸ್ತಬ್ದ ಚಿತ್ರ ಮಾದರಿ ಪ್ರದರ್ಶಿಸುವಾಗ ನಮ್ಮ ಎದೆಯಲ್ಲಿ ಡವ ಡವ ಎನ್ನುತ್ತಿರುತ್ತದೆ. ಕಳೆದ ಹದಿನಾರು ವರ್ಷಗಳಿಂದ ನಮ್ಮ ಸ್ತಬ್ದ ಚಿತ್ರ ಮಾದರಿ ಪ್ರದರ್ಶಿಸುತ್ತಿರುವ ನಮಗೆ ಈ ಮಾದರಿಯ ಭಯ ಇರಬೇಕಾದರೆ ಮೊದಲ ಬಾರಿಗೆ ಪ್ರದರ್ಶಿಸುವ ಅಧಿಕಾರಿಗಳ ಪರಿಸ್ಥಿತಿ ಹೇಗಿರಬೇಡ ?

ನಿರಾಳ:

b639dd28-f983-418f-996d-85c1f0bac7d5

ಈ ಅಂತಿಮ ಹಂತದ ಆಯ್ಕೆ ನಂತರವಷ್ಟೇ ನಮಗೆ ನಿರಾಳ . ಆದಾಗ್ಯೂ , ಅಂತಿಮ ಹಂತದ ನಂತರವೂ ಸ್ತಬ್ದ ಚಿತ್ರ ನಿರ್ಮಾಣ ನಿರೀಕ್ಷಿತ ಗುಣಮಟ್ಟದಲ್ಲಿ ಮೂಡಿಬರುತ್ತಿಲ್ಲ ಎಂದು ಅವರಿಗೆ ಅನಿಸಿದರೆ ಆಗ ಕೂಡ ಸ್ತಬ್ದಚಿತ್ರವನ್ನು ಹಿಂದಕ್ಕೆ ಕಳುಹಿಸುವ ನಿರ್ಧಾರವನ್ನು ಆಯ್ಕೆ ಸಮಿತಿ ತನ್ನ ಬಳಿ ಇಟ್ಟುಕೊಂಡಿರುತ್ತದೆ. ಇಷ್ಟೆಲ್ಲಾ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಳೆದ ಎಂಟು ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಸತತವಾಗಿ ಸಾಗಿ ಬರುತ್ತಿರುವ ನಮ್ಮ ರಾಜ್ಯದ ಸಾಧನೆಯ ಬಗ್ಗೆ ನಮಗಂತೂ ಹೆಮ್ಮೆಯಿದೆ. ನಿಮಗೂ ಹೆಮ್ಮೆ ಎನಿಸಿದರೆ ದಯವಿಟ್ಟು ನಿಮ್ಮ ಮೆಚ್ಚುಗೆಯನ್ನು ನಮ್ಮೊಡನೆ ಹಂಚಿಕೊಳ್ಳಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s