ಸಧ್ಯದಲ್ಲೇ ವಿಧಾನಸೌಧದ ವಜ್ರ ಮಹೋತ್ಸವ ಆಚರಣೆ : ಸಿದ್ದರಾಮಯ್ಯ

ಬೆಂಗಳೂರಿನ ವಿಧಾನಸೌಧದ ಕಟ್ಟಡವು 60 ವಸಂತಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಧಾನ ಪರಿಷತ್ತು ಹಾಗೂ ರಾಜ್ಯ ವಿಧಾನ ಸಭೆಯ ಸಹಯೋಗದೊಡನೆ ರಾಜ್ಯ ಸರ್ಕಾರವು ಸಧ್ಯದಲ್ಲಿಯೇ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಪ್ರಕಟಿಸಿದರು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪತ್ರಕರ್ತ ಸಿ. ಎಂ. ರಾಮಚಂದ್ರ ಅವರು ಬರೆದಿರುವ “ಎ ರೇರ್ ಅಂಡ್ ಮ್ಯಾಗ್ನಿಫಿಷಿಯಂಟ್ ಮಾನ್ಯುಮೆಂಟ್ ಟು ಡೆಮಾಕ್ರಸಿ ಅಂಡ್ ಪಾಪ್ಯೂಲರ್ ಸುಪ್ರಮೆಸಿ- ವಿಧಾನಸೌಧ” ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಅವರು ಮಾತನಾಡುತ್ತಿದ್ದರು.

Book Release on Vidhana Soudha by CMರಾಜ್ಯ ವಿಧಾನಮಂಡಲದ ಉಭಯ ಸದನಗಳ ಪೀಠಾಧಿಪತಿಗಳೊಂದಿಗೆ ಚರ್ಚಿಸಿ ವಿಧಾನಸೌಧದ ವಜ್ರ ಮಹೋತ್ಸವ ಸಂಭ್ರಮಾಚರಣೆಗೆ ಶೀಘ್ರವೇ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

“ರಾಮಚಂದ್ರ ಅವರು ವೃತ್ತಿ ಧರ್ಮಕ್ಕೆ ಮತ್ತೊಂದು ಹೆಸರು. ಜನರ ಅರಮನೆ ಎಂದೇ ಬಣ್ಣಿಸಲಾಗುವ ವಿಧಾನಸೌಧದ ನಿರ್ಮಾಣ ಹಾಗೂ ಈವರೆಗಿನ ವಿದ್ಯಮಾನಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದುಃಖದ ಸಂಗತಿ ಎಂದರೆ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ತಮ್ಮ ಕನಸಿನ ಕಟ್ಟಡದ ಉದ್ಘಾಟನೆಯವರೆಗೆ ಅಧಿಕಾರದಲ್ಲಿ ಉಳಿಯಲಿಲ್ಲ. ಅಂದು ಪ್ರತಿಪಕ್ಷಗಳು ಬಲಯುತವಾಗಿ ಇಲ್ಲದಿದ್ದರೂ, ಕೆಂಗಲ್ ಹನುಮಂತಯ್ಯ ಅವರ ಏಳಿಗೆಯನ್ನು ಸಹಿಸದ ಪಕ್ಷದೊಳಗಿನ ವ್ಯಕ್ತಿಗಳೇ ಸೃಷ್ಟಿಸಿದ ಆರೋಪಗಳ ಸುರಿಮಳೆಗೆ ಕೆಂಗಲ್ ಹನುಮಂತಯ್ಯ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

“ಯಾವುದೇ ತಪ್ಪು ಮಾಡದೇ ಇದ್ದರೂ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ನಿರ್ಮಾಣದಲ್ಲಿ ಭ್ರಷ್ಟಾಚಾರ ಎಸಗಿರುವ ಹಾಗೂ ದುಂದು ವೆಚ್ಚ ಮಾಡಿರುವ ಆರೋಪಗಳನ್ನು ಎದುರಿಸಬೇಕಾಗಿ ಬಂದದ್ದು ವಿಪರ್ಯಾಸ. ತಮ್ಮ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲು ತಾವೇ ರಚಿಸಿದ ಏಕ ವ್ಯಕ್ತಿ ಆಯೋಗದ ಮುಂದೆ ಕೆಂಗಲ್ ಹನುಮಂತಯ್ಯ ಅವರು ಹಾಜರಾಗಬೇಕಾದ ಪರಿಸ್ಥಿತಿಯೂ ಉದ್ಭವಿಸಿತು. ಆಯೋಗದ ಮುಂದೆ ವಿಚಾರಣೆಗೆ ಹಾಜರಾದ ಕೆಂಗಲ್ ಹನುಮಂತಯ್ಯ ಅವರು ನನ್ನನ್ನು ಪ್ರಶ್ನಿಸಲು ನಿಮಗೆ ಅಧಿಕಾರ ಕೊಟ್ಟವರಾರು ? ಎಂದು ಮರು ಪ್ರಶ್ನಿಸಿದ್ದು ಹಾಗೂ ಶಾಸನ ಸಭೆಯಲ್ಲಿ ಒಕ್ಕೊರಲಿನಿಂದ ಅನುಮೋದಿಸಿದ ವೆಚ್ಚಕ್ಕಿಂತಲೂ ಕಟ್ಟಡದ ಕಾಮಗಾರಿಗಳಿಗೆ ಒಂದು ರೂಪಾಯಿ ಕೂಡಾ ಹೆಚ್ಚಾಗಿ ವೆಚ್ಚ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗಿ ಬಂದದ್ದು ಇದೀಗ ಇತಿಹಾಸ. ಆಗಿನ ಕಾಲದಲ್ಲಿ ವಿಧಾನಸೌಧ ನಿರ್ಮಾಣಕ್ಕೆ ತಗುಲಿದ ವೆಚ್ಚ ಎರಡು ಕೋಟಿ ರೂ ಗಳಿಗಿಂತಲೂ ಕಡಿಮೆ. ನಿಖರವಾಗಿ ತಿಳಿಸಬೇಕೆಂದರೆ 1.99 ಕೋಟಿ ರೂ. ಮಾತ್ರ” ಎಂದು ಮುಖ್ಯಮಂತ್ರಿ ತಿಳಿಸಿದರು.

ಮೊದ ಮೊದಲು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ ಹಾಗೂ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಅವರಲ್ಲಿ ಸ್ವಾತಂತ್ರ್ಯ ಹೋರಾಟದ ರಕ್ತ ಹರಿಯುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯಗಳಲ್ಲಿ ಕುಸಿತ ಉಂಟಾಗಿದೆ. ರಾಜಕಾರಣಿಗಳಲ್ಲಿ ದೂರದೃಷ್ಠಿಯೂ ಕ್ಷೀಣಿಸುತ್ತಿದೆ. ರಾಮಚಂದ್ರ ಅವರ ಈ ಮೌಲ್ಯಯುತ ಕೃತಿ ಹಲವಾರು ಸ್ವಾರಸ್ಯಕರ ಅಂಶಗಳತ್ತ ಬೆಳಕು ಚೆಲ್ಲುತ್ತದೆ ಎಂದರು.

ರಿಯಾಯಿತಿ ಕೇಳ ಬೇಡಿ !

ವಿಧಾನ ಸೌಧದ ವಿಶೇಷತೆಗಳನ್ನು ತಿಳಿಹೇಳುವ ಈ ಪುಸ್ತಕದ ಮುಖ ಬೆಲೆ 395 ರೂಪಾಯಿಗಳು. ಇದನ್ನು ಸರ್ಕಾರ ಖರೀದಿಸಬೇಕು ಎಂದು ಮನವಿ ಮಾಡಿರುವ ರಾಮಚಂದ್ರ ಅವರು ಆದರೆ, ಯಾವುದೇ ರಿಯಾಯಿತಿಯನ್ನು ಕೇಳ ಬೇಡಿ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಅಂಶವನ್ನು ಮುಖ್ಯಮಂತ್ರಿಯವರು ಗಮನಕ್ಕೆ ತಂದಾಗ ಇಡೀ ಸಭಿಕರ ಸಮೂಹವೇ ನಗೆಗಡಲಲ್ಲಿ ಮುಳುಗಿತು. ಈ ಪುಸ್ತಕದ ಕನ್ನಡ ಅವತರಣಿಕೆಯೂ ಪ್ರಕಟಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಯಸಿದರು.

ಈ ಮುನ್ನ ಲೇಖಕ ಸಿ ಎಂ ರಾಮಚಂದ್ರ ಅವರು ಮಾತನಾಡಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ತಮ್ಮ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಕೆಂಪು ಕಟ್ಟಡ ಅಠಾರಾ ಕಚೇರಿಯಿಂದ ಹೊರಟು ಪ್ರತಿದಿನವೂ ವಿಧಾನಸೌಧದ ನಿರ್ಮಾಣ ಕಾಮಗಾರಿಗಳನ್ನು ಖುದ್ಧು ಪರಿಶೀಲಿಸುತ್ತಿದ್ದರು. ಮುಖ್ಯಮಂತ್ರಿಯವರ ಭೇಟಿ ಮತ್ತು ಪರಿಶೀಲನೆಯನ್ನು ವರದಿ ಮಾಡಲು ಹಾಜರಾಗುತ್ತಿದ್ದ ಬೆರಳೆಣಿಕೆಯ ಪತ್ರಕರ್ತರಲ್ಲಿ ತಾವೂ ಒಬ್ಬರು. ಕೆಂಗಲ್ ಹನುಮಂತಯ್ಯ ಅವರು ಅದ್ಭುತ ವ್ಯಕ್ತಿ ಹಾಗೂ ವಿಧಾನ ಸೌಧ ಕೆಂಗಲ್ ಅವರ ಅತ್ಯಧ್ಭುತ ಪರಿಕಲ್ಪನೆ ಎಂದು ಬಣ್ಣಿಸಿದರು.

ವಿಧಾನ ಸೌಧವು ಪಾಶ್ಚಿಮಾತ್ಯ ವಾಸ್ತು ಶಿಲ್ಪದ ಸೊಗಸು ಹಾಗೂ ಭಾರತೀಯ ವಾಸ್ತು ಶಿಲ್ಪದ ಸೊಬಗನ್ನು ಪ್ರದರ್ಶಿಸುತ್ತದೆ. ಪೂರ್ವ ಪ್ರವೇಶ ದ್ವಾರದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಹಾಗೂ ಉತ್ತರ ಪ್ರವೇಶ ದ್ವಾರದಲ್ಲಿ ಧಮೋ ರಕ್ಷಿತಿ ರಕ್ಷಿತಃ ಎಂದು ಕೆತ್ತಿಸಿರುವುದು ಕೆಂಗಲ್ ಹನುಮಂತಯ್ಯ ಅವರದಲ್ಲಿದ್ದ ಭಾರತೀಯತೆಯ ಪರಾಕಾಷ್ಠೆಗೆ ಸಾಕ್ಷಿ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ. ಜೆ. ಜಾರ್ಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್, ರಾಜ್ಯ ಸಭಾ ಸದಸ್ಯ ಕೆ. ರಹಮಾನ್ ಖಾನ್, ಲೋಕೋಪಯೋಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s