ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಮುಖ್ಯಾಂಶಗಳು

cmಮಕ್ಕಳು ನಮ್ಮ ಸಮಾಜದ ಆಸ್ತಿ, ದೇಶದ ಮುಂದಿನ ಪ್ರಜೆಗಳು. ಅವರ ಹಕ್ಕುಗಳ ರಕ್ಷಣೆ ಸರ್ಕಾರದ ಜವಾಬ್ಧಾರಿಯಾಗಿದೆ.ಬಾಲ್ಯ ವಿವಾಹ ಪದ್ಧತಿ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಅದು ಕಾನೂನು ಬಾಹಿರವಾದ ಶಿಕ್ಷಾರ್ಹ ಅಪರಾಧವಾಗಿದೆ. ಈ ಸಂಬಂಧ ನಮ್ಮ ಸರ್ಕಾರದಿಂದ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲಾಗಿದೆ. ಆದರೂ ಬಾಲ್ಯ ವಿವಾಹ ನಿಂತಿಲ್ಲ, ಅನಕ್ಷರತೆ, ಬಡತನ, ಅರಿವಿನ ಕೊರತೆ ಇದಕ್ಕೆ ಕಾರಣವಾಗಿದೆ. ಆದರೂ ನಮ್ಮ ಸರ್ಕಾರ ಕೈಗೊಂಡ ಕ್ರಮಗಳಿಂದ ಇತ್ತೀಚೆಗೆ ಸ್ವಲ್ಪ ಕಡಿಮೆ ಆಗಿದೆ.
ಹೆಣ್ಣಾಗಲಿ, ಗಂಡಾಗಲಿ ನಿಗದಿ ಮಾಡಿರುವ ವಯಸ್ಸಿನಲ್ಲೇ ಮದುವೆ ಆಗಬೇಕು, ಬಾಲ್ಯ ವಿವಾಹದಿಂದ ಬೆಳೆಯುವ ಮಕ್ಕಳ ಹಕ್ಕು ಮೊಟಕಾಗುತ್ತದೆ. ಮಕ್ಕಳು ಬೆಳೆಯುವ, ಓದುವ ಸಂದರ್ಭದಲ್ಲಿ ಮದುವೆ ಆದರೆ ವಿದ್ಯೆಯಿಂದ ವಂಚಿತರಾಗುತ್ತಾರೆ. ಭ್ರೂಣ ಹತ್ಯೆ ಮತ್ತು ಬಾಲ್ಯ ವಿವಾಹ ತಪ್ಪು. ಸಮಾಜದಲ್ಲಿ ಪುರುಷರಿಗೆ ಎಷ್ಟು ಹಕ್ಕುಗಳು ಇವೆಯೋ ಮಹಿಳೆಯರಿಗೂ ಅಷ್ಟೇ ಇರಬೇಕು. ಏಕೆಂದರೆ ಪುರುಷರು, ಮಹಿಳೆಯರು ಸಮಾಜದಲ್ಲಿ ಸಮಾನರು ಎಂಬುದನ್ನು ಎಲ್ಲರೂ ತಿಳಿಯ ಬೇಕು.
ಶೇ.23ಕ್ಕೆ ಇಳಿದಿದೆ

cm12005ರಲ್ಲಿ ಬಾಲ್ಯ ವಿವಾಹದ ಪ್ರಮಾಣ ಶೇ.41.2ರಷ್ಟು ಇತ್ತು. ಈಗ ಶೇ.23.2ಕ್ಕೆ ಇಳಿದಿದೆ. ಮುಂದಿನ ಐದು ವರ್ಷದಲ್ಲಿ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಆಗಬೇಕು. ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ಬಾಲ್ಯ ವಿವಾಹ ಹಿನ್ನೆಲೆಯಲ್ಲಿ ನೀಡಿರುವ ವರದಿಯನ್ನು ಸರ್ಕಾರ ಬಹುತೇಕ ಜಾರಿಗೆ ತಂದಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡುವವರನ್ನು ಎರಡು ವರ್ಷ ಶಿಕ್ಷೆಗೆ ಗುರಿಪಡಿಸುವ ಅಂಶ ತಿದ್ದುಪಡಿಯಲ್ಲಿದೆ.
ಎಷ್ಟೇ ಕಾನೂನು ತಂದರೂ ಬಾಲ್ಯ ವಿವಾಹ ಕುರಿತು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಿಂತ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬೇಕು. ಜಾಗೃತಿ ಆಂದೋಲನ ನಿರಂತರವಾಗಿ ನಡೆಯಲಿ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಬಾಲ್ಯ ವಿವಾಹ ಮುಕ್ತ ರಾಜ್ಯವಾಗಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s