ಸಮಾಜ ಬದಲಾವಣೆಗೆ ವೈಚಾರಿಕ-ವೈಜ್ಞಾನಿಕ ಶಿಕ್ಷಣ ಅಗತ್ಯ: ಮುಖ್ಯಮಂತ್ರಿ ಸಿದ್ಧರಾಮಯ್ಯ

nrp_5836ಇಂದಿನ ವಿದ್ಯಾವಂತರಿಗೆ ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ನೀಡುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಜಾತ್ಯಾತೀತ ಮನೋಭಾವ ಬೇಕು:
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ವಿವಿಯ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು, ವಿದ್ಯಾವಂತರಿಗೆ ವೈಜ್ಞಾನಿಕ ಮನೋಭಾವನೆಯ ಶಿಕ್ಷಣ ನೀಡದಿದ್ದರೆ, ಅವರು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವರು. ಇದು ಉತ್ತಮ ಸಮಾಜಕ್ಕೆ ಹಿನ್ನಡೆಯಾಗಬಹುದು. ಸಮಾಜದ ಪ್ರಗತಿಗೆ ವೈಚಾರಿಕ-ವೈಜ್ಞಾನಿಕ ಅರಿವಿನ ಜೊತೆಗೆ ಜಾತ್ಯಾತೀತ ಮನೋಭಾವನೆಗಳು ಅಗತ್ಯವಿದೆ ಎಂದು ಮುಖ್ಯಮಂತ್ರಿ ಗಳು ಹೇಳಿದರು.
ಚಿಂತನೆಗಳು ಜೀವಂತ:

nrp_5852ಬ್ರಹ್ಮಶ್ರಿ ನಾರಾಯಣ ಗುರುಗಳು ಸಮಾಜ ಸುಧಾರಕರಾಗಿ ದಾಶ೯ನಿಕರಾಗಿದ್ದಾರೆ. ಸಾಮಾಜಿಕ ಶೈಕ್ಷಣಿಕ ಸುಧಾರಣೆ ತರಲು ಬಹಳ ಹೋರಾಟ ಮಾಡಿದವರು. ಶೂದ್ರರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಇಲ್ಲದ ಸಂದರ್ಭದಲ್ಲಿ ಶೂದ್ರರಿಗಾಗಿಯೇ 60 ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಇಂತಹ ನಾರಾಯಣಗುರುಗಳ ಚಿಂತನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ. ವಿಶೇಷವಾಗಿ ಬುದ್ಧ, ಅಂಬೇಡ್ಕರ್, ನಾರಾಯಣಗುರುಗಳ ಚಿಂತನೆ ಇಂದಿನ ಯುವಜನರಿಗೆ ತಲುಪಿಸಬೇಕು. ಮಹಾನ್ ಸಾಧಕರು ದೈಹಿಕವಾಗಿ ಇಲ್ಲದಿದ್ದರೂ, ಅವರ ಚಿಂತನೆಗಳು ಜೀವಂತವಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಅನುದಾನ ನೀಡಲು ಬದ್ದ:

nrp_5866ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾದ ನಾರಾಯಣಗುರು ಅಧ್ಯಯನ ಪೀಠವು ಸಾಥ೯ಕವಾದ ಕೆಲಸ ಮಾಡಬೇಕಿದೆ ಈಗಾಗಲೇ ರಾಜ್ಯ ಸರಕಾರ ಈ ಪೀಠಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನೂ ಒಂದು ಕೋಟಿ ನೀಡಲಿದೆ. ರಾಜ್ಯದ ವಿವಿಗಳಲ್ಲಿರುವ ಪೀಠಗಳು ಕ್ರಿಯಾಶೀಲವಾಗಿರಲು ಮತ್ತು ಅವುಗಳಲ್ಲಿ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಇನ್ನಷ್ಟು ಅನುದಾನ ನೀಡಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.

ವಿಶ್ವವಿದ್ಯಾಲಯದ ಮಾಡ್ಯುಲರ್ ಪ್ರಯೋಗಾಲಯವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉದ್ಘಾಟಿಸಿದರು.

ರಾಷ್ಟ್ರಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ದಾಖಲೆ ನಿಮಿ೯ಸಿದ ಮಂಗಳೂರು ವಿವಿ ಕ್ರೀಡಾಪಟುಗಳಿಗೆ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಪುರಸ್ಕಾರ ನೀಡಿದರು.

nrp_5879
ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಪ್ರಸಾರಾಂಗದ ರಜತ ಗ್ರಂಥ ಸರಣಿಯ 19 ಕೃತಿಗಳನ್ನು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಅವರು ಬಿಡುಗಡೆ ಮಾಡಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s