ಜಾಂಬೂರಿ ಉತ್ಸವ:ಕಣ್ಮನ ಸೆಳೆದ ಲೇಜರ್ ಶೋ ಬೆಳಕಿನ ಗೆರೆಗಳಲ್ಲಿ ಅರಳಿದ ಕಥೆಗಳು

ಮೈಸೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ನಡೆದ ಲೇಸರ್ ಶೋನಲ್ಲಿ ವಿವಿಧ ಕಥಾನಕಗಳು, ಸರ್ಕಾರಿ ಕಾರ್ಯಕ್ರಮಗಳು, ಸಾಹಿತಿಗಳು ವಿಜೃಂಭಿಸಿ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬೆಳ್ಳಿಗೆರೆಯಲ್ಲಿ ಕಥಾನಕಗಳು
ರಾಪಿಡ್ ಬಲೂನ್ ಎಂಬ ಕಥೆಯಲ್ಲಿ ಚಿಕ್ಕ ಮಗುವು ಆಟವಾಡುತ್ತಿದ್ದಾಗ ತನ್ನ ಬಲೂನ್ನ್ನು ಕಳೆದುಕೊಳ್ಳುತ್ತದೆ. ಕಳೆದು ಹೋದ ಬಲೂನಿನ ಬಗ್ಗೆ ಮಗುವಿನ ಮನಸ್ಸಿನಲ್ಲಿ ಹುಟ್ಟುವ ತೊಳಲಾಟ ಹಾಗೂ ಬಲೂನ್ ದೊರತ ಸಂದರ್ಭದಲ್ಲಿ ಉಂಟಾಗುವ ಸಂತೋಷದ ಕ್ಷಣಗಳನ್ನು ಕಥೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಂಜನಗೂಡು ರಸ್ತೆಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ 17ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಉತ್ಸವದಲ್ಲಿ ಲೇಸರ್ ಶೋ ಮೂಲಕ ಬೆಳಕಿನ ಗೆರೆಗಳಲ್ಲಿ ಅನಾವರಣಗೊಳಿಸಿತು. ನಂತರ ಪುಣ್ಯಕೋಟಿ ಕಥೆಯನ್ನು ಪ್ರದರ್ಶಿಸಲಾಯಿತು.
ಬೆಳಕಿನ ಗೆರೆಗಳಲ್ಲಿ ಸಾಹಿತಿಗಳು:
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಾಭಾಗ್ಯ, ವಿದ್ಯಾಸಿರಿ, ಋಣಮುಕ್ತ, ಕ್ಷೀರಧಾರೆ, ಮನಸ್ವಿನಿ, ಮೈತ್ರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬಾರಿಸು ಕನ್ನಡ ಡಿಂಡಿಮವ ಲೇಸರ್ ಷೋ ನಲ್ಲಿ ಕರ್ನಾಟಕದ ಐತಿಹಾಸಿಕ ಸ್ಥಳಗಳು, ಕನ್ನಡ ನಾಡುನುಡಿಗಾಗಿ ಕೊಡುಗೆ ನೀಡಿದ ಸಾಹಿತಿಗಳು, ಕವಿಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರನ್ನು ಪರಿಚಯ ಮಾಡಿ ಕೊಡಲಾಯಿತು. ವಂದೇ ಮಾತರಂ ದೇಶಭಕ್ತಿ ಗೀತೆಯನ್ನು ನಮ್ಮ ಧ್ವಜದ ಮೂರು ಬಣ್ಣಗಳಾದ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ವರ್ಣಮಯವಾಗಿ ಚಿತ್ರಿಸಿ ಮಕ್ಕಳ ಕಣ್ಮನ ಸೆಳೆಯಿತು.
ಸಾಬ್ರೇ ಡಾನ್ಸ್:
ಸಾಬ್ರೇ ಡಾನ್ಸ್ ಕಥೆಯಲ್ಲಿ ಹಸಿವಾದ ಒಂದು ಪಕ್ಷಿಯು ಕಪ್ಪೆಯನ್ನು ಆಹಾರವಾಗಿ ಹಿಡಿಯಲು ಹೊರಡುತ್ತದೆ. ಇದನ್ನು ತಿಳಿದ ಕಪ್ಪೆ ಪಕ್ಷಿಯನ್ನು ತನ್ನ ವಿವಿಧ ಭಂಗಿಯ ಮೂಲಕ ಆಕರ್ಷಿಸಿ ಸ್ನೇಹ ಬೆಳೆಸಿ ಕಪ್ಪೆ ಮತ್ತು ಪಕ್ಷಿ ಒಳ್ಳೆ ಸ್ನೇಹಿತರಾಗುತ್ತಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು ಟಿ ಖಾದರ್, ಮಾಜಿ ಸಂಸದರಾದ ಹೆಚ್. ವಿಶ್ವನಾಥ್, ಮುಖ್ಯಮಂತ್ರಿ ಚಂದ್ರು, ಭಾರತಿ ವಿಷ್ಣುವರ್ಧನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯ ಮತ್ತು ಇತರೆ ಗಣ್ಯರು ಶಿಬಿರಾರ್ಥಿಗಳ ಜೊತೆ ಲೇಸರ್ ಶೋವನ್ನು ವೀಕ್ಷಿಸಿದರು.⁠⁠⁠⁠

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s