ಕರ್ನಾಟಕ ಚಲನಚಿತ್ರ ಪ್ರಶಸ್ತಿ , ಸಹಾಯಧನ ಅರ್ಜಿ ಆಹ್ವಾನ

2..jpg

2016 ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಕಥಾನಕ ಚಲನಚಿತ್ರ/ಮಕ್ಕಳ ಚಿತ್ರ ಪ್ರಶಸ್ತಿ , ಕಿರುಚಿತ್ರ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಿನಾಂಕ: 01/01/2016 ರಿಂದ 31/12/2016 (ಎರಡು ದಿನಗಳು ಸೇರಿದಂತೆ ) ರವರೆಗೆ ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸಾರ್ ) ಯಿಂದ ಪ್ರಮಾಣ ಪತ್ರ ಪಡೆದಿರುವ ಚಲನಚಿತ್ರ ಗಳು/ ಮಕ್ಕಳ ಕಥಾನಕ ಚಿತ್ರಗಳು ಪ್ರಶಸ್ತಿಗೆ ಮತ್ತು ಸಹಾಯಧನಕ್ಕೆ ಅರ್ಹವಾಗಿರುತ್ತವೆ.

2016 ನೇ ಸಾಲಿನಲ್ಲಿ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿರುವ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಕನ್ನಡ ಹಾಗೂ ಆಂಗ್ಲ ಭಾಷೆ ಪುಸ್ತಕಗಳು ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಅರ್ಹವಾಗಿರುತ್ತವೆ.

ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ “ಡಾ.ರಾಜ್ ಕುಮಾರ್ ಪ್ರಶಸ್ತಿ “ಯನ್ನು , ರಾಜ್ಯದ ಚಲನಚಿತ್ರ ರಂಗದಲ್ಲಿ ನಿರ್ದೇಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ನಿರ್ದೇಶಕರನ್ನು ಗುರುತಿಸಿ “ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ “ ಮತ್ತು ಕನ್ನಡ ಚಲನಚಿತ್ರದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ “ ಡಾ.ವಿಷ್ಣುವರ್ಧನ್ ಪ್ರಶಸ್ತಿ “ ನೀಡಲಾಗುತ್ತದೆ. 2016 ನೇ ಕ್ಯಾಲೆಂಡರ್ ವರ್ಷದ ಜೀವಿತಾವಧಿ ಸಾಧನೆ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ನಾಮ ನಿರ್ದೇಶನ ಮಾಡುವವರ ಹೆಸರು, ಸಾಧನೆ/ಕೊಡುಗೆಗಳುಳ್ಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡಬಹುದಾಗಿದೆ

ಅರ್ಜಿ ಹಾಗೂ ನಾಮನಿರ್ದೇಶನಗಳನ್ನು ನಿರ್ದೇಶಕರು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ಇವರಿಗೆ ದಿನಾಂಕ: 31-01-2017 ರೊಳಗೆ ತಲುಪುವಂತೆ ಕಳುಹಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s