ಉದ್ಯೋಗ ಖಾತ್ರಿ ಮಾನವ ದಿನಗಳ ಏರಿಸಲು ಪ್ರಧಾನಿಗೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗದ ಮನವಿ

5

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಹತ್ತು ಕೋಟಿ ಮಾನವ ದಿನಗಳ ಸೃಜನೆಗೆ ಅನುವಾಗುವಂತೆ ಕಾರ್ಮಿಕ ಆಯವ್ಯಯವನ್ನು ಹೆಚ್ಚಿಸಲು ಕೋರಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಿದೆ.

ಪ್ರಸ್ತುತ 6.07 ಕೋಟಿ ಮಾನವ ದಿನಗಳಿಂದ ಹತ್ತು ಕೋಟಿ ಮಾನವ ದಿನಗಳ ಸೃಜನೆಯಿಂದ ಬರದಿಂದ ತತ್ತರಿಸುತ್ತಿರುವ ರಾಜ್ಯದಲ್ಲಿ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ. ಕಳೆದ ಆರು ವರ್ಷಗಳಿಂದ ಸತತವಾಗಿ ಬರದ ಬವಣೆಯಿಂದ ತೀವ್ರವಾಗಿ ಬಳಲುತ್ತಿರುವ ರಾಜ್ಯವು ಪ್ರಸಕ್ತ 2016-17 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 176 ತಾಲ್ಲೂಕುಗಳ ಪೈಕಿ 139 ತಾಲ್ಲೂಕುಗಳಲ್ಲಿ ಮತ್ತಷ್ಟು ಕಠಿಣ ಬರ ಪರಿಸ್ಥಿತಿ ಎದುರಿಸುತ್ತಿದೆ. ಮಳೆಯ ಪ್ರಮಾಣವು ಹಿಂಗಾರು ಋತುವಿನಲ್ಲೂ ಅತ್ಯಲ್ಪವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪ್ರಾಥಮಿಕವಾಗಿ ಬರ ಉಪಶಮನ ಉಪ ಕ್ರಮವಾಗಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಜನತೆಗೆ ಉದ್ಯೋಗಾವಕಾಶ ಕಲ್ಪಿಸಿ ನೆರವು ಒದಗಿಸಲು ಅಧಿಕ ಮಾನವ ದಿನಗಳನ್ನು ಸೃಜಿಸುವ ಅಗತ್ಯವಿದೆ.
ಮಾನವ ದಿನಗಳ ಸಂಖ್ಯೆ ಏರಿಸಿ:
ಬರ ಘೋಷಣೆಯ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮಂತ್ರಾಲಯಕ್ಕೆ ಅಕ್ಟೋಬರ್ 18 ಹಾಗೂ ನವೆಂಬರ್ 2 ರಂದು ಸಲ್ಲಿಸಿದ ಸಂದರ್ಭದಲ್ಲಿಯೇ ಅರ್ಹ ಮಾನವ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವಂತೆ ಕೋರಲಾಗಿದ್ದು, ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ಸಮ್ಮತಿಯ ನಿರೀಕ್ಷೆಯಲ್ಲಿದ್ದೇವೆ. ಐವತ್ತೆಂಟು ಸಾವಿರಕ್ಕೂ ಹೆಚ್ಚು ಕುಟುಂಬಗಳು 100 ದಿನಗಳ ಉದ್ಯೋಗ ಸೌಲಭ್ಯವನ್ನು ಈಗಾಗಲೇ ಪಡೆದಿವೆ. ಬರದ ಕಠಿಣತೆಯನ್ನು ಪರಿಗಣಿಸಿ ಬರ ಪೀಡಿತ ಪ್ರದೇಶದಲ್ಲಿ ಅರ್ಹ ಮಾನವ ದಿನಗಳ ಸಂಖ್ಯೆಯನ್ನು ಭಾರತ ಸರ್ಕಾರವು 200 ದಿನಗಳಿಗೆ ಹೆಚ್ಚಿಸಲು ಪರಿಗಣಿಸುವ ಅವಶ್ಯಕತೆ ಇದೆ.
ಗುಣಮಟ್ಟದಲ್ಲಿ ಕುಸಿತ:
ಪ್ರಸಕ್ತ 2016-17 ನೇ ಸಾಲಿನಲ್ಲಿ ಹತ್ತು ಕೋಟಿ ಮಾನವ ದಿನಗಳ ಪರಿಷ್ಕøತ ಕಾರ್ಮಿಕ ಆಯವ್ಯಯವು ಒಟ್ಟಾರೆ ವಾರ್ಷಿಕ 3,954 ಕೋಟಿ ರೂ ಆಗಲಿದೆ. ಡಿಸೆಂಬರ್ 26 ರ ವರೆಗೆ 5.82 ಕೋಟಿ ಮಾನವ ದಿನಗಳು ಸೃಜನೆಯಾಗಿದೆ. ಅಲ್ಲದೆ, 2,051 ಕೋಟಿ ರೂ ವೆಚ್ಚವಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಕಳೆದ ಸಾಲಿನಲ್ಲಿ ಪಾವತಿಸಬೇಕಾಗಿದ್ದ ಭಾಗಶಃ ಮೊತ್ತವನ್ನೂ ಒಳಗೊಂಡಂತೆ 1,610 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯಡಿ ಉದ್ಭವಿಸಿದ್ದ ಹಣಕಾಸು ಸಮಸ್ಯೆಯನ್ನು ಎದುರಿಸುವ ಸಲುವಾಗಿ ಸಕಾಲಿಕ ಕೂಲಿ ಪಾವತಿಗಾಗಿ ರಾಜ್ಯದ ಪಾಲಿಗಿಂತಲೂ 862 ಕೋಟಿ ರೂ ಅಧಿಕ ಮೊತ್ತದ ಅನುದಾನವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಕಳೆದ ಒಂದರಿಂದ ಮೂರು ತಿಂಗಳ ಅವಧಿಯಲ್ಲಿ ಖರೀದಿಸಲಾದ ಸಾಮಗ್ರಿಗಳಿಗೆ 250 ಕೋಟಿ ರೂ ಬಾಕಿ ಪಾವತಿಸಿದೆ. ಸಾಮಗ್ರಿಗಳ ಬಾಕಿ ಪಾವತಿಯಲ್ಲಿನ ವಿಳಂಬದ ಹಿನ್ನೆಲೆಯಲ್ಲಿ, ಮಾನವ ದಿನಗಳ ಸೃಜನೆಯ ವೇಗವು ಕಡಿಮೆಯಾಗಿದೆ. ಅಂಗನವಾಡಿ ಕೇಂದ್ರ, ರಾಜೀವ್ ಗಾಂಧಿ ಸೇವಾ ಕೇಂದ್ರ, ದನದ ಕೊಟ್ಟಿಗೆ, ತೋಟಗಾರಿಕಾ ಕಾಮಗಾರಿಗಳು ಒಳಗೊಂಡಂತೆ ಎಲ್ಲಾ ಸಂಪತ್ತು ಸೃಷ್ಠಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಇವೆಲ್ಲವೂ ಪ್ರಗತಿಯ ವಿವಿಧ ಹಂತಗಳಲ್ಲಿ ಅನಗತ್ಯ ವಿಳಂಬವು ವೆಚ್ಚದಲ್ಲಿ ಏರಿಕೆ ಹಾಗೂ ಗುಣಮಟ್ಟದಲ್ಲಿ ಕುಸಿತ ಉಂಟಾಗಲಿದೆ.

ಎರಡನೇ ಕಂತನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನವೆಂಬರ್ 21 ರ ರಾಜ್ಯ ಸರ್ಕಾರವು ಸಲ್ಲಿಸಿದ 2,856.72 ಕೋಟಿ ರೂ ಮನವಿಗೆ ಪ್ರತಿಯಾಗಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಡಿಸೆಂಬರ್ 16 ರಂದು 250.02 ಕೋಟಿ ರೂ ಕೂಲಿ ಹಾಗೂ ಐದು ಕೋಟಿ ರೂ ಸಾಮಗ್ರಿ ಹಾಗೂ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡಿದೆ. ಬಾಕಿಯನ್ನು ಪರಿಗಣಿಸಿದಲ್ಲಿ ಇದು ನಗಣ್ಯ.
ಸ್ಪಂದನೆ ವಿಶ್ವಾಸ:
ಈ ಹಿನ್ನೆಲೆಯಲ್ಲಿ, ಕಾಯಿದೆಯಲ್ಲಿನ ಶಾಸನಬದ್ಧ ಕಟ್ಟುಪಾಡುಗಳನ್ನು ಪಾಲಿಸಲು ಎರಡನೇ ಕಂತಿನ ಮೊತ್ತ 2,856.72 ಕೋಟಿ ರೂ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ರಾಜ್ಯದ ಬರಪೀಡಿತ 139 ತಾಲ್ಲೂಕುಗಳಲ್ಲಿ ಪ್ರತಿ ಕುಟುಂಬದ ಅರ್ಹ ಮಾನವ ದಿನಗಳನ್ನು 100 ದಿನಗಳಿಂದ 200 ದಿನಗಳಿಗೆ ಹೆಚ್ಚಿಸಲು ಸಂಬಂಧಿತರಿಗೆ ಸೂಚಿಸಲು ಕೋರುತ್ತೇನೆ. ಭಾರತ ಸರ್ಕಾರವು ನಮ್ಮ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s