ಸರ್ಕಾರದ ನೆರವು ಹೆಚ್ಚಳ:ಕನ್ನಡ ಚಿತ್ರರಂಗ ಸಂಭ್ರಮಿಸುವ ಕಾಲ ಇದು

ಕನ್ನಡ  ಬೆಳ್ಳಿ ತೆರೆಗೆ ಈಗ ಒಳ್ಳೆಯ ಕಾಲ. ಅದು ಎಂಬತ್ತರ ದಶಕ . ಕನ್ನಡ ಚಲನ ಚಿತ್ರ ಲೋಕಕ್ಕೆ ಚೈತ್ರಕಾಲ . ಸಂಸ್ಕಾರ, ಕಾಡು, ನಾಂದಿ, ಘಟಶ್ರಾದ್ಧ , ಪಲ್ಲವಿ, ವಂಶವೃಕ್ಷ. ಹೀಗೆ ಸಾಲು ಸಾಲು ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದವು.

ಕನ್ನಡ ಚಲನಚಿತ್ರ ರಂಗದ  ಈ ಸಾಧನೆಯ ಹಿಂದೆ ಸರ್ಕಾರದ ಬೆಂಬಲವಿತ್ತು, ಒತ್ತಾಸೆಯಿತ್ತು. ಪ್ರತಿಭಾನ್ವಿತ ನಿರ್ದೇಶಕರಿಗೆ, ಸಾಹಸಿ ನಿರ್ಮಾಪಕರಿಗೆ ಕರ್ನಾಟಕ ಸರ್ಕಾರ ಸಹಾಯ ಧನದ ನೆರವು ನೀಡಿ ಪ್ರೋತ್ಸಾಹ ಒದಗಿಸಿದೆ. ಇಡೀ ಭಾರತ ದೇಶದಲ್ಲಿ ಚಲನಚಿತ್ರಗಳಿಗೆ ಸಹಾಯ ಧನದ ನೆರವು ಒದಗಿಸಿದ ಮೊದಲ ರಾಜ್ಯ ಕರ್ನಾಟಕ ಎನ್ನುವ ಹೆಮ್ಮೆ ನಮ್ಮ ರಾಜ್ಯಕ್ಕಿದೆ. ಈ ಪರಂಪರೆಯನ್ನು ನಮ್ಮ ಎಲ್ಲ ಸರ್ಕಾರಗಳು ಹಾಗೆಯೇ ಮುಂದುವರಿಸಿಕೊಂಡು ಬರುತ್ತಿವೆ.

ಈ ನಿಟ್ಟಿನಲ್ಲಿ ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರ ರಂಗಕ್ಕೆ ಪ್ರೋತ್ಸಾಹ , ಬೆಂಬಲ , ಸಹಾಯ ಧನ ಹೀಗೆ ಸಾಲು ಸಾಲು ಸಹಾಯಗಳ ಸುರಿಮಳೆಯನ್ನೇ ಸುರಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಸರ್ಕಾರ ನೀಡಿರುವ ನೆರವನ್ನು ನೋಡಿ ಚಿತ್ರ ರಂಗವೇ ಅಚ್ಚರಿಯ ಬೆರುಗು ನೋಟ ಬೀರುತ್ತಿದೆ.

ಈ ಸರ್ಕಾರ 2013 ರಲ್ಲಿ ಬರುವ ತನಕ   ಕೇವಲ 75 ಗುಣಾತ್ಮಕ ಕನ್ನಡ ಚಲನ ಚಿತ್ರಗಳಿಗೆ ಮಾತ್ರ ತಲಾ ಹತ್ತು ಲಕ್ಷ ರೂಗಳ. ಸಹಾಯ ಧನವನ್ನು ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೊದಲ ವರ್ಷವೇ ನೂರು ಚಲನಚಿತ್ರಗಳಿಗೆ ಸಹಾಯ ಧನ ನೀಡುವುದಾಗಿ ಘೋಷಿಸಿದರು. ಮರುವರ್ಷ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನೆರವಾಗುವಂತೆ ಬೆಂಗಳೂರಿನ ಹೆಸರಘಟ್ಟದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿತ್ರನಗರಿ ನಿರ್ಮಿಸುವುದಾಗಿ ಭರವಸೆ ನೀಡಿದರು. ಆದರೆ ನ್ಯಾಯಾಲಯ ಈ ಸ್ಥಳದಲ್ಲಿ ಚಿತ್ರನಗರಿ  ನಿರ್ಮಾಣಕ್ಕೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅನುಮತಿ ನೀಡಲು ನಿರಾಕರಿಸಿದಾಗ ಅದರಿಂದ  ಎದೆಗುಂದದೆ ಮೈಸೂರು ಬಳಿ ನೂರು ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಿಸಿದರು. ನುಡಿದಂತೆ ನಡೆದು ಈಗ ಚಿತ್ರನಗರಿ  ನಿರ್ಮಾಣಕ್ಕೆ ಜಮೀನು  ಮಂಜೂರು  ಮಾಡಿದ್ದಾರೆ. ನಿರ್ಮಾಣ ಕಾರ್ಯ ಇಷ್ಟರಲ್ಲೇಶುರುವಾಗಲಿದೆ.

ಈಗ ಕನ್ನಡ ಚಲನ ಚಿತ್ರಗಳಿಗೆ ನೀಡುವ ಸಹಾಯಧನದ ಚಿತ್ರಗಳ ಸಂಖ್ಯೆ 100 ಕ್ಕೆ ಏರಿದೆ . ಕನ್ನಡ ಚಿತ್ರಗಳು ಬಿಡುಗಡೆಯ ಸಮಯದಲ್ಲಿ ಎದಿರುಸುತ್ತಿದ್ದ ಚಿತ್ರ ಮಂದಿರಗಳ ಕೊರತೆಯನ್ನು ನಿವಾರಿಸಲು ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ  ಐವತ್ತು  ಲಕ್ಷ ರೂಗಳ ಪ್ರೋತ್ಸಾಹ ಧನ ನೀಡುವ ನೀತಿಯನ್ನು ಜಾರಿಗೆ ತಂದಿದ್ದಾರೆ. ಇಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ  ಪ್ರದರ್ಶಿಸಬೇಕು ಎನ್ನುವುದು ಕಡ್ಡಾಯ .

ಪ್ರತಿ ವರ್ಷ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಕನ್ನಡ ಚಿತ್ರ ರಂಗದ ದೃವತಾರೆ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ ೨೪ ರಂದು ಪ್ರದಾನ ಮಾಡುವ ಸರ್ಕಾರಿ  ಆದೇಶವನ್ನು ಹೊರಡಿಸಿ ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಿಸಲಾಗಿದೆ.

ಕನ್ನಡ ಚಿತ್ರ ರಂಗದ ಮೇರು ಪ್ರತಿಭೆ ನಟಸಾರ್ವಬೌಮ  ಡಾ. ರಾಜ್ ಕುಮಾರ್ ಅವರ ಸ್ಮಾರಕವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಮತ್ತೊಬ್ಬ ಮೇರು ನಟ  ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮೈಸೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ .

ಇನ್ನು ಖುದ್ದು ಸಿದ್ದರಾಮಯ್ಯನವರೇ ಆಸಕ್ತಿ ವಹಿಸಿ ಬೆಂಗಳೂರು ಅಂತರಾಷ್ಟ್ರ್ರೀಯ ಚಲನ ಚಿತ್ರೋತ್ಸವಕ್ಕೆ ನಾಲ್ಕು ಕೋಟಿ ರೂಗಳ ಅನುದಾನ ನೀಡಿ ಏಕಕಾಲಕ್ಕೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೋತ್ಸವ ಏರ್ಪಡಿಸಲು ಒತ್ತಾಸೆ ನೀಡಿದ್ದಾರೆ.

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ  ಒಂದು ಸರ್ಕಾರದಿಂದ ಇದಕ್ಕಿಂತ ಹೆಚ್ಚಿನ ನೆರವು , ಪ್ರೋತ್ಸಾಹ , ಒತ್ತಾಸೆ ನಿರೀಕ್ಷಿಸುವುದು ಅತಿ ಆಸೆಯಾಗುತ್ತದೆ.

ಎನ್ . ಆರ್  ವಿಶುಕುಮಾರ್

ನಿರ್ದೇಶಕರು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s