ವರ್ತಮಾನದಲ್ಲಿ ನಿರ್ಭೀತ ಬರವಣಿಗೆಯ ಪತ್ರಕರ್ತರು ಬೇಕು : ಹೆಚ್. ಕಾಂತರಾಜ

ಪತ್ರಿಕೋದ್ಯಮ ವೃತ್ತಿಯು ವಿಶ್ವದಲ್ಲೇ ಅತ್ಯಂತ್ಯ ಗೌರವ ಮತ್ತು ಮಾನ್ಯತೆ ಹೊಂದಿದ ವೃತ್ತಿಯಾಗಿದೆ. ಆತ್ಮಸಾಕ್ಷಿಗೆ ದ್ರೋಹ ಬಗೆಯದೆ ಪ್ರಾಮಾಣಿಕತೆಯಿಂದ ಸಮಾಜದ ಹುಳುಕನ್ನು, ಏರುಪೇರುಗಳನ್ನು ನಿರ್ಭೀತಿಯಿಂದ ಬರವಣಿಗೆ ಮೂಲಕ ಸಮಾಜಕ್ಕೆ ತೋರುವ ಮನೋಸ್ಥೈರ್ಯವುಳ್ಳಂತಹ ಯುವ ಪತ್ರಕರ್ತರು ಹೆಚ್ಚು ಹೆಚ್ಚು ಈ ವೃತ್ತಿ ರಂಗಕ್ಕೆ ಬರಬೇಕೆಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಹೆಚ್. ಕಾಂತರಾಜ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಆವರಣದಲ್ಲಿಂದು ಹಿಂದುಳಿದ ವರ್ಗಗಳ ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ‘ವೃತ್ತಿ ನಿರೂಪಣಾ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿನ ಮೇಲು ಕೀಳುಗಳನ್ನು ಸರಿಪಡಿಸುವ ಕೆಲಸವೇ ಸಾಮಾಜಿಕ ನ್ಯಾಯವಾಗಿದೆ. ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಎಲ್ಲರಿಗೂ ಸಮಾನ ಅವಕಾಶ ದೊರಕ ಬೇಕು ಈ ನಿಟ್ಟಿನಲ್ಲಿ ಪ್ರೇರಣಾತ್ಮಕ ಬರವಣಿಗೆಗಳು ಪತ್ರಕರ್ತರಿಂದ ಮೂಡಬೇಕು ಎಂದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಮಾಜದಲ್ಲಿನ ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ, ದಲಿತರ ಸಮಸ್ಯೆಗಳನ್ನು ತುಲನೆ ಮಾಡಿ ಬರೆಯುವ ಪ್ರವೃತ್ತಿ ಹೆಚ್ಚಬೇಕು ಎಂದ ಅವರು, ಪತ್ರಕರ್ತರು ಸಂವಿಧಾನಕ್ಕೆ ಬದ್ದತೆಯುಳ್ಳವರಾಗಿರಬೇಕು ಮತ್ತು ಸಂವಿಧಾನಾತ್ಮಕ ಹಕ್ಕುಗಳನಷ್ಟೇ ಪ್ರತಿಪಾದಿಸದೆ ಮೂಲಭೂತ ಕರ್ತವ್ಯಗಳಿಗೂ ಚ್ಯುತಿಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರು ಮಾತನಾಡಿ, ಕಾರ್ಯ ಕ್ಷೇತ್ರ ಯಾವುದೇ ಇರಲಿ ಸಾಧನೆ ಮಾಡಬೇಕಾದರೆ ಗುರಿ ಇರಬೇಕು. ಯಾರಿಗೇ ಆಗಲಿ ಯಶಸ್ಸು ಒಂದೇ ದಿನದಲ್ಲಿ ದೊರಕುವುದಿಲ್ಲ. ಅದಕ್ಕೇ ಕಠಿಣ ಪರಿಶ್ರಮ ಅತ್ಯಗತ್ಯ. ಅಂತೆಯೇ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಸಹ ಸಾಧನೆಗೈಯಲು ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುಂದುವರೆಯುವಂತೆ ಕಿವಿಮಾತು ಹೇಳಿದರು.

ವೃತ್ತಿ ಮತ್ತು ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಶಿಬಿರಾರ್ಥಿಗಳು ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಕರೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಎ. ಆರ್. ಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕಿನಲ್ಲಿ ಎದುರಾಗುವ ಸ್ಪರ್ಧೆಗಳನ್ನು ಎದುರಿಸಿ ವೃತ್ತಿ ಕೌಶಲ್ಯವನ್ನು ದಿಟ್ಟತನದಿಂದ ಎದುರಿಸಲು ಇಂತಹ ತರಬೇತಿಗಳು ಅತ್ಯಗತ್ಯವಾಗಿದ್ದು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸುತ್ತದೆ ಎಂದರು.

ಹಿರಿಯ ಪತ್ರಕರ್ತ ಮತ್ತು ಕಾರ್ಯಾಗಾರದ ನಿರ್ದೇಶಕ ಈಶ್ವರ ದೈತೋಟ ಅವರು ಕಾರ್ಯಾಗಾರದ ಸ್ವರೂಪ ಕುರಿತು ಅಭ್ಯರ್ಥಿಗಳಿಗೆ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ ನಿರ್ದೇಶಕರಾದ ವಸಂತನಾಯಕ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ. ಸಹನಾ ಮತ್ತು ಸಹಾಯಕ ನಿರ್ದೇಶಕಿ ಎಂ.ಆರ್. ಮಮತಾ ಹಾಗೂ ವಾರ್ತಾ ಸಹಾಯಕ ಕೆ. ಎನ್. ವಿಜಯಾನಂದ ಅವರು ಸೇರಿದಂತೆ ಸಂಸ್ಥೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

8893480f-6231-4398-bcba-e4bea10c8a53.jpg

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s